ಹಿಂದೆ ಹೇಗೆ ಚಿಮ್ಮುತಿತ್ತು


ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ
ಏನೋ ಶಂಕೆ ಭೀತಿ

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ

ಹಮ್ಮು ಬೆಳದು ನಮ್ಮ ಬಾಳು
ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು
 
                  - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

1 ಕಾಮೆಂಟ್‌:

  1. ಸಿ. ಅಶ್ವಥ್ ಅವರ ಕಂಠ ಸಿರಿಯಿಂದ ಹೊಮ್ಮಿದ ಈ ಗೀತೆ ಅನನ್ಯವಾದುದು. ಇಂತಹ ಹಾಡಿಗೆ ಲೇಖನಿಯಾದ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರಿಗೂ ಹಾಗೂ ಈ ಹಾಡಿಗೆ ಧ್ವನಿಯಾದ ಸಿ. ಅಶ್ವಥ್ ರವರಿಗೂ ತುಂಬು ಹೃದಯದ ಧನ್ಯವಾದ.
    ನಿಮ್ಮ ನೆನಹಾಗಿ ನಿಮ್ಮೊಳುದಯಿಸಿದ ನಾನಿಲ್ಲವೇ............ ಹಿಂದೆ ಹೇಗೆ ಚಿಮ್ಮುತಿತ್ತು
    ಕಣ್ಣ ತುಂಬ ಪ್ರೀತಿ...........

    ಪ್ರತ್ಯುತ್ತರಅಳಿಸಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....